ಸಾರಾಂಶ
ಜೀವನದಲ್ಲಿ ಇನ್ನೂ ಎತ್ತರ ಕ್ಕೆ ಹಾರುವ ಕನಸು ಕಾಣುತ್ತಿದ್ದೀರಾ? ಬಾಸ್ ಮಹಿಳೆಯಾಗಲು ಯಾವ ತಡೆ ಇದೆ ನಿಮಗೆ
'ಬಿ ಎ ಬಾಸ್ ಲೇಡಿ' ಪುಸ್ತಕದಲ್ಲಿ ಲೇಖಕಿ ತಮಗಾದ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ಮತ್ತು ತಾನು ಕಲಿತುಕೊಂಡ ಅಂಶಗಳು ತನ್ನ ವ್ರತ್ತಿ ಜೀವನದ ಬೆಳವಣಿಗೆಗೆ ಹೇಗೆ ಸಹಾಯ ಮಾಡಿದವು ಎಂಬ ಬಗ್ಗೆ ಹೇಳಿಕೊಂಡಿದ್ದಾರೆ. ದೊಡ್ಡ ಕನಸು ಕಾಣುತ್ತಿರುವ ಮಹಿಳೆಯರನ್ನು ಇನ್ನಷ್ಟು ಬಲಪಡಿಸಲು ಲೇಖಕಿಯ ಹ್ರದಯಾಂತರಂಗದಿಂದ ಬಂದ ಮಾತುಗಳಿವು. ಇನ್ನೂ ಹೆಚ್ಚಿನದನ್ನು ಬಯಸುವ ಮಹಿಳೆಯರಿಗೆ ತನ್ನ ಮಾತುಗಳು ಪ್ರೇರಣೆ ಆಗಬೇಕು, ಅವರು ಮುಂದಿನ ಹೆಜ್ಜೆಯನ್ನು ಧೈರ್ಯದಿಂದ ಇಡಬೇಕು ಎನ್ನುವುದು ಈ ಪುಸ್ತಕದ ಏಕೈಕ ಉದ್ದೇಶ. ಇದು ಬಯಕೆಗಳನ್ನು ಹೊತ್ತ ಮಹಿಳೆಯರನ್ನು ಬೆಂಬಲಿಸುತ್ತಿರುವ ಪುರುಷರಿಗಾಗಿಯೂ ಹೌದು. ಪ್ರತಿ ಮಹಿಳೆಯ ಒಳಗೂ ಒಂದು ವಿಶೇಷ ಕಿಡಿ ಇರುತ್ತದೆ. ಅದು ಬೆಳಕಾಗುವಂತೆ ಮಾಡಬೇಕಾಗುತ್ತದೆ ಅಷ್ಟೆ. ಲೇಖಕಿ ಯ ಹ್ರದಯಕ್ಕೆ ಹೆಚ್ಚು ಸನಿಹವಾದ ವಿಷಯ ಇದು. ಈ ಪುಸ್ತಕ ನಿಮಗೊಬ್ಬ ಸ್ನೇಹಿತ/ಸ್ನೇಹಿತೆಯಂತೆ, ಜೀವನದ ಕವಲುದಾರಿಯಲ್ಲಿ ಮಾರ್ಗದರ್ಶಕನ ಪಾತ್ರ ವಹಿಸಬಲ್ಲದು. ನಿನ್ನಿಂದ ಏನೂ ಆಗದು, ಸುಮ್ಮನಿರು ಎಂದು ಎಲ್ಲರೂ ನಿನಗೆ ಹೇಳಿದಾಗ ಈ ಪುಸ್ತಕ ನಿನ್ನನ್ನು ಹುರಿದುಂಬಿಸುತ್ತದೆ. ಪ್ರತಿಯೊಬ್ಬ ಮಹಿಳೆಯೂ ತಾನು ಈ ತನಕ ಸಾಧಿಸಿದಕ್ಕಿಂತಲೂ ಹೆಚ್ಚು ಸಾಧಿಸಬೇಕು ಎನ್ನುವುದೇ ಲೇಖಕಿಯ ಬಯಕೆ. ಇದಕ್ಕಾಗಿ ಜೀವನದಲ್ಲಿ ತನ್ನ ಅನುಭವಗಳನ್ನು ಆಕೆ ಹಂಚಿಕೊಂಡ ಉದ್ದೇಶ ನೀವು ಶೀಘ್ರವಾಗಿ ಇನ್ನೂ ಎತ್ತರ ಕ್ಕೆ ಏರುವಂತಾಗಲಿ ಎನ್ನುವುದು ಮಾತ್ರ.