ಒಂದು ಒದ್ದೆ ದಿಂಬನ್ನು ಅಪ್ಪಿ, ಉರಿವ ಮೇಣದ ಬತ್ತಿಯ ಹಿಡಿದು, ಗಂಟಲು ಉಬ್ಬಿದಾಗ ಉಸಿರು ಹಿಡಿದು ಬಸಿದ ಅಕ್ಷರಗಳ ಪೋಣಿಸಿ, ಸೂತ್ರ ಹರಿದು ಎತ್ತಲೋ ಓಡೋ ಗಾಳಿಪಟ ಗಳ ಕಟ್ಟಿ ಹಾಕಿ, ಆಕಾಶ ಬುಟ್ಟಿಯಾಗಿಸಿ ನಡುವೆ ದೀಪ ಹಚ್ಚಿಟ್ಟು ಇದೋ ನೋಡು ಅಂತ ತೋರಿಸಿ, ಅದನ್ನ ಮರೀಚಿಕೆ ಅನಿಸೋ ಹಾಗೆ ನಕ್ಕುಬಿಟ್ಟಿದ್ದಾಳೆ. ಇವೆಲ್ಲದರ ನಡುವೆ ಪ್ರಶ್ನೆಗಳಿಲ್ಲ, ಉತ್ತರಗಳಂತೂ ಇಲ್ಲವೇ ಇಲ್ಲ. ಈ ಕವಿತೆಗಳು ಅವಳಂತೆ non-judgmental. ಬರೀ ಅವಲೋಕನ ಮಾತ್ರ, ಎಲ್ಲಿಗೆ ತಲುಪುತ್ತೇವೆ ಅನ್ನುವುದು ನಮಗೆ ಬಿಟ್ಟದ್ದು!
- ರೂಪಶ್ರೀ
ಸಾವಿತ್ರಿಯಾಗಿ ಅವರ ಕವನಗಳ ಕಟ್ಟೋಣ ಚೆಂದವೆನಿಸುತ್ತವೆ. ಅವರ ಕವನಜಂಟಿವರಸೆಯ
“ಉಪನಿಷತ್ತುಗಳು ಕರಗತವಾಗಿದ್ದರೂ,
ಇಹ-ಪರ ತತ್ವಗಳ ಅರಿತು ಅರಗಿಸಿಕೊಂಡರೂ,
ಮಾಯಾಮೃಗದ ಎದುರು ಮರೆವು ಸರ್ವಜ್ಞಾನ;
ಪುಸ್ತಕ ತೆರೆದರೆ ಇನ್ನೂ ಜಂಟಿವರಸೆಯಷ್ಟೇ !”
ಸಾಲುಗಳು ಮತ್ತೆ ಮತ್ತೆ ಕಾಡುತ್ತವೆ.
- ಸುನೀಲ್ ಹಳೆಯೂರು
Sorry we are currently not available in your region. Alternatively you can purchase from our partners
Sorry we are currently not available in your region. Alternatively you can purchase from our partners