Share this book with your friends

nigooda sundari! / ನಿಗೂಢ ಸುಂದರಿ!

Author Name: S.g.shivashankar | Format: Paperback | Genre : Literature & Fiction | Other Details

ಶಾಮ್ ಎನ್ನುವ ಇಂಜಿನಿಯರ್ ತನ್ನ ಕೆಲಸ ಮುಗಿಸಿ ಅರವತ್ತು ಮೈಲಿ ದೂರದಲ್ಲಿರುವ ತನ್ನ ಊರು ಮೈಸೂರಿಗೆ ಹೊರಡುತ್ತಾನೆ. ಅದು ಅಮಾವಾಸ್ಯೆಯ ದಿನ. ಧೋಧೋ ಎನ್ನುವ ಮಳೆ ಬೇರೆ ಹಿಡಿದಿರುತ್ತದೆ. ಕಂಪೆನಿಯ ಮ್ಯಾನೇಜರ್ ಇಂತಾ ಪರಿಸ್ಥಿತಿಯಲ್ಲಿ ಪ್ರಯಾಣ ಬೇಡ ಎಂದು ಎಚ್ಚರಿಸುತ್ತಾನೆ. ಮೈಸೂರಿನ ದಾರಿಯ ಮೂವತ್ತೈದನೆ ಮೈಲಿಕಲ್ಲಿನಲ್ಲಿ ಅನಿಷ್ಟಗಳು ಘಟನೆಗಳು ಸಂಭವಿಸಿವೆ. ಇಂದು ಪ್ರಯಾಣ ಬೇಡ ಎಂದು ಎಚ್ಚರಿಸಿದರೂ ಶಾಮ್ ಕಾರಿನಲ್ಲಿ ಹೊರಡುತ್ತಾನೆ. ಆ ಹುಚ್ಚು ಮಳೆಯಲ್ಲಿ ಪ್ರಯಾಣ ಪ್ರಯಾಸವಾಗುತ್ತದೆ. ಮೂವತ್ತೈದನೆಯ ಮೈಲಿಕಲ್ಲಿನ ಬಳಿ ಕಾರು ನಿಂತೇ ಹೋಗುತ್ತದೆ. ಮಿಂಚಿನ ಬೆಳಕಲ್ಲಿ ಸುಂದರ ಯುವತಿಯೊಬ್ಬಳು ಕಾಣಿಸುತ್ತಾಳೆ…ಶಾಮ್ ಸಮ್ಮೋಹಿನಿಗೆ ಒಳಗಾದಂತಾಗುತ್ತದೆ…ಮುಂದೆ..ಆಗಬಾರದ್ದು ಆಗಿಯೇತೀರುತ್ತದೆ…!

Read More...

Ratings & Reviews

0 out of 5 ( ratings) | Write a review
Write your review for this book
Sorry we are currently not available in your region.

ಎಸ್.ಜಿ.ಶಿವಶಂಕರ್

ಎಸ್.ಜಿ.ಶಿವಶಂಕರ್ ಕನ್ನಡ ಸಾರಸ್ವತ ಲೋಕದಲ್ಲಿ ಚಿರಪರಿಚಿತ ಹೆಸರು. ವೃತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ಸಾಹಿತಿ, ನಾಟಕಕಾರ. ತಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಹಿನ್ನೆಲೆಯನ್ನು ಸಾಮಾಜಿಕ ಸನ್ನಿವೇಶಗಳಿಗೆ ಹದವಾಗಿ ಬೆಸೆದು ತಮ್ಮ ಕೃತಿಗಳಿಗೆ ವಿಶಿಷ್ಟ ಮೆರುಗು ನೀಡುತ್ತಾರೆ. “ಪ್ರತಿಲಿಪಿ” ಎನ್ನುವ ಸಾಹಿತ್ಯಿಕ ಜಾಲತಾಣದಲ್ಲಿ “ಸೂಪರ್ ಸಾಹಿತಿ” ಎನ್ನುವ ಬಿರುದು ಪಡೆದಿದ್ದಾರೆ. “ನಿಗೂಢ ಸುಂದರಿ” ಕಾದಂಬರಿಯನ್ನು “ಪ್ರತಿಲಿಪಿ”ಯಲ್ಲಿ ಸರಿಸುಮಾರು ಐದು ಸಾವಿರ ಜನರು ಈಗಾಗಲೇ ಓದಿ ಮೆಚ್ಚಿಕೊಂಡಿದ್ದಾರೆ.

Read More...

Achievements

+3 more
View All