“ಪ್ರಾಥಮಿಕ ಆರೋಗ್ಯ ಕೇಂದ್ರ, ಹಗರೆ” - ಗ್ರಾಮೀಣ ಭಾಗದಲ್ಲಿ ತನ್ನ ಕುಟುಂಬದವರೊಂದಿಗೆ ಕೇಂದ್ರಸ್ಥಾನದಲ್ಲಿ ವಾಸವಿದ್ದುಕೊಂಡು ಜನರ ಆರೋಗ್ಯ ಸೇವೆಗೆ ನಿಂತ ಯುವವೈದ್ಯೆಯ ಅನುಭವಗಳ ಗುಚ್ಛ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ವೈದ್ಯರ ಅವಶ್ಯಕತೆ ಮತ್ತು ಅವರ ಎದುರಿರುವ ಸವಾಲುಗಳನ್ನು ಸಾಮಾನ್ಯ ಜನರಿಗೆ ಲೇಖಕರ ಸ್ವಯಂ ಅನುಭವಗಳ ಮೂಲಕ ಹೇಳುವ ಪ್ರಯತ್ನ. ಹದಿನೆಂಟು ಮನಮುಟ್ಟುವ ಕಥನ/ಲೇಖನಗಳ ಮೂಲಕ ಹಳ್ಳಿ ಆಸ್ಪತ್ರೆಯ ನೈಜ ಚಿತ್ರಣವನ್ನು ಓದುಗರ ಮುಂದಿಡುವ ಪ್ರಯತ್ನ. ಪುಸ್ತಕ ಓದಿ ಒಂದಷ್ಟು ಯುವ ವೈದ್ಯರು ಸರ್ಕಾರಿ ಸೇವೆಗೆ ಮುಂದೆ ಬರಲಿ ಎಂಬ ಆಶಯ ಮತ್ತು ಎಲ್ಲಾ ಸವಾಲುಗಳನ್ನು ಭೇದಿಸುತ್ತಾ ಜನರ ನಿರಂತರ ಸೇವೆಯಲ್ಲಿ ಬದುಕಿನ ಸಾರ್ಥಕತೆ ಕಾಣುತ್ತಿರುವ ಮಾನವೀಯ ವೈದ್ಯರಿಗೆ ನಮನ ಹೇಳುವ ಉದ್ದೇಶದಿಂದ ಹೊರಬಂದಿರುವ ಗ್ರಾಮೀಣ ವೈದ್ಯಕೀಯ ಜಗತ್ತನ್ನು ಜನಸಾಮಾನ್ಯರಿಗೆ ತಲುಪಿಸುವ ಅದ್ಭುತ ಪ್ರಯತ್ನ.
Sorry we are currently not available in your region. Alternatively you can purchase from our partners
Sorry we are currently not available in your region. Alternatively you can purchase from our partners