ಸಂಕ್ಷಿಪ್ತ ಭಾರತ ಕಥಾ : ಜನಪ್ರಿಯ ಮಹಾಭಾರತದ ಕಥೆಯ ಸಂಕ್ಷಿಪ್ತ ಪದ್ಯರೂಪ ಈ ಪುಸ್ತಕದಲ್ಲಿದೆ. ಕಡಿಮೆ ಸಮಯದಲ್ಲಿ ಈ ಕಥೆಯನ್ನು ಪದ್ಯವಾಗಿ ಓದಲು ಇದು ಅನುಕೂಲಕರ. ಇದರ ಭಾಗವಾಗಿ ಭಗವದ್ಗೀತೆಯ ಸಾರಾಂಶವೂ ಅಡಕವಾಗಿದೆ.
ನಾಗರಾಜ ಕ್ಯಾಸನೂರು ಅವರು ಒಬ್ಬ ಹವ್ಯಾಸೀ ಬರಹಗಾರ. ಪಾರಂಪರಿಕ ಸಾಹಿತ್ಯದ ಕಥೆ-ಕೃತಿಗಳನ್ನು ಕನ್ನಡ ಪದ್ಯರೂಪದಲ್ಲಿ ಓದುಗರ ಮುಂದಿಡುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ದಿಕ್ಕಿನಲ್ಲಿಯ ಅವರ ಕೆಲ ರಚನೆಗಳು ಪ್ರಕಟಣೆಯ ದಾರಿಯಲ್ಲಿವೆ.