Share this book with your friends

Earth and Space / ಭೂಮ್ಯಾಕಾಶ ಒಂದು ಪ್ರೇಮ ಪ್ರಸಂಗ / A Love Story

Author Name: Naveen Veerabhadra | Format: Paperback | Genre : Poetry | Other Details

ಭೂಮ್ಯಾಕಾಶ ಕವನ ಸಂಕಲನ ಒಟ್ಟು ೩೫ ಕವನಗಳ ಗುಚ್ಛ. ಇದರ ಪ್ರಮುಖ ಉದ್ದೇಶ ಮರೆಯಾಗುತ್ತಿರುವ ಕನ್ನಡ ಪದಗಳು ಸಾಮಾಜಿಕ ಮುಖ್ಯವಾಹಿನಿಗೆ ಮರಳಿ ಮನೆಮಾತಾಗಬೇಕು ಎಂಬುದಾಗಿದೆ.

ಕನ್ನಡ ಪ್ರೇಮದಿಂದ ಹೊರಡುವ ಓದಿನ ಹಾಯಿ, ಪ್ರೀತಿಯ ನದಿ ದಾಟಿ, ಜೀವನದ ಕಷ್ಟ ಕಾರ್ಪಣ್ಯಗಳನ್ನ ಅನುಭವಿಸಿ ಕೊನೆಗೆ ಪರಿಸರದ ಜಾಡು ಹಿಡಿದು ಕುಕ್ಕರಹಳ್ಳಿಯ ದಂಡೆ ತಲುಪುತ್ತದೆ. ಈ ಪುಸ್ತಕದ ಬಹುತೇಕ ಕವನಗಳು ನಾಲ್ಕು ಪಂಕ್ತಿ ಮತ್ತು ಪ್ರತಿ ಪಂಕ್ತಿಗೂ ನಾಲ್ಕು ಸಾಲುಗಳ ಶೈಲಿಯನ್ನು ಹೊಂದಿದ್ದರೂ ಸಹ ಕೆಲವು ಕವನಗಳ ವಿಶಿಷ್ಟ ರಚನೆ ಕಣ್ಸೆಳೆಯುತ್ತದೆ. ಉದಾಹರಣೆಗೆ ‘ಕನ್ನಡ ಕಾಗುಣಿತ’ ಕವನದಲ್ಲಿ ಕ ಅಕ್ಷರದ ಕಾಗುಣಿತವನ್ನು ಪ್ರತಿ ಸಾಲಿನ ಪ್ರಥಮ ಅಕ್ಷರವನ್ನಾಗಿ ಬಳಸಿ ರಚಿಸಿರುವುದು ವಿಶೇಷ.

ಈ ಪುಸ್ತಕದ ಸಾಲುಗಳಲ್ಲಿ ಪ್ರೀತಿಯು ಇದೆ, ಬದುಕುವ ಹಂಬಲವೂ ಇದೆ, ಬದುಕು ಏಕೆ ಎಂಬ ಜಿಜ್ಞಾಸೆಯು ಇದೆ.

ಇದು ಕೇವಲ ಕವನಗಳ ಪುಸ್ತಕವಲ್ಲ; ಇದು ಕನ್ನಡದ, ಜೀವನದ ಮತ್ತು ಭಾಷೆಯ ಸಂಭ್ರಮ. 

Read More...
Paperback

Ratings & Reviews

0 out of 5 ( ratings) | Write a review
Write your review for this book
Paperback 150

Inclusive of all taxes

Delivery

Item is available at

Enter pincode for exact delivery dates

Also Available On

ನವೀನ್ ವೀರಭದ್ರ

ನವೀನ್ ವೀರಭದ್ರರವರು ಮೂಲತಃ ಕೊಡಗಿನ  ಸೋಮವಾರಪೇಟೆಯ ಬಳಗುಂದ ಗ್ರಾಮದ ನಿವಾಸಿ. ತಮ್ಮ ಶೈಕ್ಷಣಿಕ ಜೀವನವನ್ನು ಇಲ್ಲಿಯೇ ಮುಗಿಸಿ, ಕೋಟ್ಯಂತರ ಯುವಕರಂತೆ ಉದ್ಯೋಗ ಅರಸುತ್ತಾ  ಬೆಂಗಳೂರಿಗೆ ಬಂದು, ಇಲ್ಲಿನ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ “ಅಟೋಮೇಷನ್ ಡಿಜಿಟಲ್ ಕನ್ಸಲ್ಟೆಂಟ್“ ಆಗಿ ಕಳೆದ ೧೧ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಮಾಹಿತಿ ತಂತ್ರಜ್ಞಾನ (IT) ಕ್ಷೇತ್ರವೇ ಇವರ ದೈನಂದಿನ ಜೀವನಕ್ರಮವಾದರೂ ಸಹ ಇವರ ಮನಸನ್ನು ಆವರಿಸಿರುವುದು ಕನ್ನಡ ಮತ್ತು ಕನ್ನಡ ಸಾಹಿತ್ಯದ ಮೇಲಿನ ಪ್ರೇಮ. 

ಇವರು ಕನ್ನಡ ಸಾಹಿತ್ಯ ಕಾವ್ಯಪ್ರಪಂಚದಲ್ಲಿ ತಮ್ಮದೇ ಆದ ವಿಶಿಷ್ಟ ಹಾದಿಯನ್ನು ರೂಪಿಸುತ್ತಿರುವ ಕವಿ. ಇವರ ಸಾಹಿತ್ಯ ಮರೆಯಾಗುತ್ತಿರುವ ಕನ್ನಡ ಪರಂಪರೆಯ ಪದಗಳನ್ನು ಮತ್ತೆ ನೆನಪಿಸುತ್ತದೆ, ಜೀವನದ ತಾತ್ವಿಕ ಅಂಶಗಳ ಶಾಶ್ವತತೆಯ ಸತ್ಯವನ್ನು ಎತ್ತಿ ಹಿಡಿಯುತ್ತದೆ.

“ಭಾಷೆ ಬೆಳೆಯಲಿ ಕಾವ್ಯ ಹರಡಲಿ!” ಎಂಬ ನೆಲೆಗಟ್ಟಿನಲ್ಲಿ ಇವರ ಸಾಹಿತ್ಯಯಾನ ಮುಂದುವರೆಯಲಿ.

Read More...

Achievements