You cannot edit this Postr after publishing. Are you sure you want to Publish?
Experience reading like never before
Sign in to continue reading.
"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಶ್ರೀಮಂತ ಯಶವಂತರಾಯರು ಸತ್ತಾಗ ಅದು ಯಾರಿಗೂ ಕೊಲೆ ಎನಿಸಿರಲಿಲ್ಲ. ಅದು ಕೊಲೆ ಎಂಬ ಮೂಕರ್ಜಿ ಪೋಲೀಸರಿಗೆ ಸಿಗುತ್ತದೆ. ಪೋಲೀಸರು ಶವ ಪರೀಕ್ಷೆಗೆ ಸಮಾಧಿ ತೆಗೆದಾಗ ಅಲ್ಲಿ ಶವ ನಾಪತ್ತೆಯಾಗಿರುತ್ತದೆ. ಯಾರಾದರೂ ಶವವನ್ನು ಏಕೆ ಅಪಹರಿಸುತ್ತಾರೆ ಎನ್ನುವುದು ಯಶವಂತರಾಯರ ಮನೆಯವರಿಗೆ ಅಪಶಕುನದಂತೆ ಕಾಣಿಸುತ್ತದೆ. ಯಾವ ಕಾರಣಕ್ಕಾಗಿ ಶವ ಅಪಹರಿಸಿದ್ದಾರೆ ಎಂದು ತಿಳಿಯಲು ಸಾಧ್ಯವಾಗದೆ ಸೋತು ಸುಣ್ಣವಾಗುತ್ತಾರೆ. ಯಶವಂತರಾಯರ ಅಳಿಯ ಮೂರ್ತಿ ಡಿಟೆಕ್ಟೀವ್ ವಿಕ್ರಮರಿಗೆ ಕೇಸು ವಹಿಸುತ್ತಾರೆ. ಯಶವಂತರಾಯರ ಶವ ಅಪಹರಣಕ್ಕೆ ಕಾರಣ ಅದು ಕೊಲೆ ಇರಬಹುದು! ಶವ ಪೋಲೀಸರ ಕೈಗೆ ಸಿಕ್ಕರೆ ಪೋಸ್ಟ್ ಮಾರ್ಟಮ್ ನಡೆಯುತ್ತದೆ. ಆಗ ಕೊಲೆಗಾರನನ್ನು ಹುಡುಕಲು ಸಹಾಯವಾಗುತ್ತದೆ. ಈ ಕಾರಣದಿಂದಲೇ ಶವದ ಅಪಹರಣವಾಗಿದೆ ಎನ್ನುವ ಸುಲಭ ತರ್ಕ ಎಂದು ವಿಕ್ರಮ್ ಯೋಚಿಸುತ್ತಾನೆ. ಯಶವಂತರಾಯರ ಶ್ರೀಮಂತಿಕೆಯ ಫಲಾನುಭವಿಗಳ ಮೇಲೆಯೇ ಮೊದಲ ಅನುಮಾನ. ಶೋಧನೆ ಮಾಡುತ್ತಾ ಹೋದಂತೆ ಕೊಲೆಯಾಗಿರಬಹುದಾದ ಯಶವಂತರಾಯರ ಜೀವನದಲ್ಲಿ ಸಂಬಂಧ ಹೊದ್ದಿದ್ದವರ ಕಗ್ಗಂಟು ಎಳೆಎಳೆಯಾಗಿ ಬಿಡಿಸಿಕ್ಕೊಳ್ಳುತ್ತದೆ. ಒಂದು ಲಕೋಟೆ ಹೇಗೆ ಕೊಲೆಯ ರಹಸ್ಯವನ್ನು ಬಿಡಿಸಿ ಕೊಲೆಗಾರನನ್ನು ಹಿಡಿಯಲು ಸಹಾಯವಾಗುತ್ತದೆ ಎನ್ನುವ ರಹಸ್ಯವನ್ನು ಕಾದಂಬರಿ ಹಿಡಿದಿಟ್ಟಿದೆ.
ವಿಕ್ರಮ್ ಈ ಸಾವಿನ ರಹಸ್ಯ ಹೇಗೆ ಬಿಡಿಸುತ್ತಾನೆ ಎನ್ನುವ ಕುತೂಹಲ ಅವನ ಪಾರ್ಟ್ನರ್ ಶರತ್‍ಗೆ.
ಶುದ್ಧ ಪತ್ತೇದಾರಿ ಕಾದಂಬರಿಗಳು ಎಪ್ಪತ್ತರ ದಶಕದಿಂದ ವಿರಳವಾಗಿವೆ. ಆ ಕೊರತೆಯನ್ನು ಈ ಕಾದಂಬರಿ ತುಂಬುವುದು ಎಂಬ ಆಶಯ ಲೇಖಕರದ್ದು.
ಎಸ್.ಜಿ.ಶಿವಶಂಕರ್
ಇಪ್ಪತ್ತು ದಶಕಗಳಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಶ್ರೀ ಎಸ್.ಜಿ.ಶಿವಶಂಕರ್ ವೃತ್ತಿಯಲ್ಲಿ ಇಂಜಿನಿಯರ್. ಮುವತ್ತು ವರ್ಷ ಸರ್ಕಾರಿ ಸ್ವಾಮ್ಯದ ಬೃಹತ್ ಖಾರ್ಕಾನೆಯೊಂದರಲ್ಲಿ ಸೀನಿಯರ್ ಮ್ಯಾನೇಜರ್ ಆಗಿದ್ದರು. ಕಾರ್ಖಾನೆಯ ಯಾಂತ್ರಿಕತೆಗೆ ಅವರ ಸೃಜನಶೀಲ ಮನಸ್ಸು ದಣಿದು ಸ್ವಯಂ ನಿವೃತ್ತಿಗೆ ಪ್ರೇರೇಪಿಸಿತು. ನಂತರ ಅವರು ಕೆಲವು ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜಿಗಳಲ್ಲಿ ಎಂ.ಬಿ.ಎ ವಿಧ್ಯಾರ್ಥಿಗಳಿಗೆ ಭೋದಿಸಿದರು. ಅದರ ಜೊತೆಗೇ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡರು. ಈ ಕಾದಂಬರಿ ಅವರ ಬರವಣಿಗೆಯ ಮೊದಲ ದಿನಗಳಲ್ಲಿ ಬರೆದದ್ದು.
ಶ್ರೀಯುತರು ಕ್ರಿಯಾಶಾಲಿ ನಾಟಕಕಾರ, ನಟ, ನಿರ್ದೇಶಕ. ಸುಮಾರು ಇಪ್ಪತ್ತೈದು ನಾಟಕ ರಚಿಸಿದ್ದಾರೆ. ತಾವೇ ಸ್ವತಃ ನಿರ್ದೇಶಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಲವಾರು ಗೌರವಗಳಿಗೆ ಪಾತ್ರರಾಗಿದ್ದಾರೆ. ಇವರ ಕೆಲವು ಕಾದಂಬರಿಗಳು ಧಾರಾವಾಹಿಯಾಗಿ ತರಂಗ, ಕರ್ಮವೀರ, ಮಂಗಳ ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅರ್ವತ್ತಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ. .
The items in your Cart will be deleted, click ok to proceed.