ಬಸವಣ್ಣನವರ ಉತ್ತಮ ವಚನಗಳನ್ನು ಕಥೆಗಳ ಮೂಲಕ ಮಕ್ಕಳು ಕಲಿತರೆ ಹೇಗಿರುತ್ತದೆ?
ಬಾಲ ಬಸವ ವಚನ ಕಾಮಿಕ್ಸ್ - ಸಂಪುಟ 1 ದರಲ್ಲಿ(Volume 1) ಬಸವಣ್ಣನವರ ಹತ್ತು ಪ್ರಸಿದ್ಧ ವಚನಗಳನ್ನು, ಬಾಲ ಬಸವ ಮತ್ತು ಅವನ ಸ್ನೇಹಿತರ ಸುಂದರ ಚಿತ್ರಕಥೆಗಳ ಮೂಲಕ ಮಕ್ಕಳಿಗೆ ಪರಿಚಯಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ, ಪ್ರತಿ ವಚನವೂ ಸಮಾನತೆ, ದಯೆ, ಧೈರ್ಯ ಮತ್ತು ಒಳಗುಣಗಳನ್ನು ಕಲಿಸುತ್ತದೆ.
ಇದು ಕೇವಲ ಕಾಮಿಕ್ ಅಲ್ಲ - ಆಡಿಯೋ–ವಿಡಿಯೋ ಮೂಲಕ ಕಥೆಯನ್ನು ಕೇಳಿ, ನೋಡಿ ಅನುಭವಿಸಿ.
ಪ್ರತಿ ವಚನವನ್ನು ಸ್ಕ್ಯಾನ್(Scan) ಮಾಡಿದರೆ, ಮಕ್ಕಳು ಕಥೆಯನ್ನು ಕೇಳಿ, ನೋಡಿ, ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
“ನಾವು ಕಲಿಯುತ್ತಿದ್ದೇವೆ” ಎಂಬ ಭಾವನೆ ಇಲ್ಲದೇ, ಮಕ್ಕಳು ಒಳ್ಳೆಯ ನಡತೆ, ಕರುಣೆ, ನಂಬಿಕೆ, ಭಕ್ತಿ ಮತ್ತು ಸರಿಯಾದ ಮಾರ್ಗದ ಮಹತ್ವವನ್ನು ಸಹಜವಾಗಿ ಕಲಿಯುತ್ತಾರೆ.
ಬಾಲ ಬಸವ ಕಾಮಿಕ್ಸ್ ಮಕ್ಕಳಲ್ಲಿ ಉತ್ತಮ ಗುಣಗಳು ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ.
ಉತ್ತಮ ಕಥೆಗಳು. ಉತ್ತಮ ಮೌಲ್ಯಗಳು- ಪ್ರತಿ ವಚನದ ಮೂಲಕ